ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಂದು ಕುಂದಾಪುರದಲ್ಲಿ ನಟ “ರಕ್ಷಿತ್ ಶೆಟ್ಟಿ” ಅವರ ಬಗ್ಗೆ ವಾಹಿನಿಯೊಂದರಲ್ಲಿ ವರದಿಯಾದ “ಸಿನಿ ಅಡ್ಡ” ಎನ್ನುವ ಬೇಜವಾಬ್ದಾರಿತನದ ಕಾರ್ಯ ಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಅವಹೇಳನಕಾರಿ ಯಾಗಿ ಮಾತನಾಡಿದ್ದಲ್ಲದೆ ನಿಂದಿಸಿದ್ದಾರೆ.
ಇದರಿಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಲ್ಲಿ ಬಹಳ ಬೇಸರ ಉಂಟಾಗಿದೆ. ಆದ್ದರಿಂದ ಇಂದು ಕುಂದಾಪುರದಲ್ಲಿ ಯುವ ಬಂಟರ ಸಂಘದ ವತಿಯಿಂದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಇವರ ನೇತತ್ವದಲ್ಲಿ ಕುಂದಾಪುರ ಪೋಲಿಸ್ ಉಪಾಧೀಕ್ಷಕರ ಕಚೇರಿಯಲ್ಲಿ ಕಂಪ್ಲೇಂಟನ್ನು ಈ ಕಾರ್ಯಕ್ರಮ ಆಯೋಜನೆ ಮಾಡಿದವರ ವಿರುದ್ಧ ನೀಡಲಾಗಿದೆ.
ಈ ಸಿನಿ ಅಡ್ಡ ಎನ್ನುವ ಬೇಜವಾಬ್ದಾರಿತನದ ಕಾರ್ಯಕ್ರಮವನ್ನು ಆಯೋಜಿಸಿದವರು ಯಾರೇ ಆಗಲಿ ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿಕೊಳ್ಳಲಾಯಿತು.
ಕುಂದಾಪುರ ಪೊಲೀಸ್ ಠಾಣೆಯ ಡಿ.ಎಸ್.ಪಿ ಶ್ರೀಕಾಂತ್ ಅವರಿಗೆ ಬಂಟರ ಸಂಘದ ಅಧ್ಯಕ್ಷರು ಮತ್ತು ಅವರ ತಂಡ ಮನವಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಸಂತೋಷ್ ಶೆಟ್ಟಿ, ಸದಸ್ಯರಾದ ಭರತ್ ಶೆಟ್ಟಿ, ಸಚಿನ್ ಶೆಟ್ಟಿ ವಕ್ವಾಡಿ, ರೋಶನ್ ಶೆಟ್ಟಿ, ಮಹೇಂದರ್ ಶೆಟ್ಟಿ ಉಪಸ್ಥಿತರಿದ್ದರು.