ವಿದ್ಯಾ ದೀವಿಗೆ

ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಹಮ್ಮಿಕೊಂಡ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ‘ವಿದ್ಯಾ ದೀವಿಗೆ’ ಪ್ರಮುಖವಾದುದು. ಉನ್ನತ ಶಿಕ್ಷಣವನ್ನು ಪಡೆಯುವ ಸಾಮರ್ಥ್ಯ ಮತ್ತು ಹಂಬಲಗಳು ಇರುವ ನಡುವೆಯೂ ಆರ್ಥಿಕ ಅಡೆತಡೆಗಳಿಂದ ವ್ಯಾಸಂಗವನ್ನು ಮುಂದುವರಿಸಲು ಕಷ್ಟಸಾಧ್ಯವಾದ ವಿದ್ಯಾರ್ಥಿಗಳಿಗಾಗಿಯೇ ರೂಪಿಸಲಾದ ಯೋಜನೆ ಇದು. ಸಮುದಾಯದೊಳಗಿನ ಕೊಡುಗೈ ದಾನಿಗಳಿಂದ ಆರ್ಥಿಕ ನೆರವನ್ನು ಪಡೆದು ಆಶಕ್ತ ಕುಟುಂಬಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕನ್ನು ಹಚ್ಚುವ ವಿಶಿಷ್ಟ ಯೋಜನೆ ಇದು. ತಾಲೂಕಿನ ವಿಭಿನ್ನ ಗ್ರಾಮೀಣ ಪ್ರದೇಶಗಳನ್ನು ಪ್ರತಿನಿಧಿಸುವ ಹಾಗೂ ತಂದೆ, ತಾಯಿಯರನ್ನು ಕಳೆದುಕೊಂಡ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ವಿದ್ಯಾ ದೀವಿಗೆ ಯೋಜನೆಯ ಮೂಲಕ ತಮ್ಮ ಶೈಕ್ಷಣಿಕ ಬದುಕನ್ನು ರೂಪಿಸಿಕೊಂಡ ಪ್ರಮುಖರ ವಿವರ ಈ ಕೆಳಗಿನಂತಿದೆ.

  • ಆರ್ಥಿಕವಾಗಿ ಹಿಂದುಳಿದ ಮತ್ತು ತಂದೆ, ತಾಯಿಯರನ್ನು ಕಳೆದುಕೊಂಡ ಕುಂದಾಪುರ ತಾಲೂಕು ಗೋಳಿಯಂಗಡಿಯ ಅಶ್ವಿನ್ ಶೆಟ್ಟಿ ಅವರನ್ನು ನಮ್ಮ ಸಂಘವು ಗುರುತಿಸಿದ್ದು ನಮ್ಮ ಸಂಘದ ಗೌರವ ಮಹಾಪೋಷಕರಾದ ಆನಗಳ್ಳಿ ಕರುಣಾಕರ ಹೆಗ್ಡೆ ಹಾಗೂ ಬೆಂಗಳೂರು ಬಂಟರ ಸಂಘವು ಜಂಟಿಯಾಗಿ ಆತನ ಶೈಕ್ಷಣಿಕ ವೆಚ್ಚವನ್ನು ಭರಿಸುತ್ತಿದೆ.
  • ಆರ್ಥಿಕವಾಗಿ ಹಿಂದುಳಿದ ಮತ್ತು ತಂದೆ, ತಾಯಿಯರನ್ನು ಕಳೆದುಕೊಂಡ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕ್ರೋಢಾಬೈಲೂರಿನ ಹತ್ತನೇ ತರಗತಿಯ ವಿದ್ಯಾರ್ಥಿನಿ ಕು. ಸಾಕ್ಷಿ ಶೆಟ್ಟಿ ಅವರ ಶೈಕ್ಷಣಿಕ ವೆಚ್ಚವನ್ನು ಭರಿಸುವ ಸಲುವಾಗಿ ೨೦೧೪-೧೫ನೇ ಶೈಕ್ಷಣಿಕ ವರ್ಷದಲ್ಲಿ ರೂ. ೨೦೦೦ ಮತ್ತು ೨೦೧೫-೧೬ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಮತ್ತು ತಂದೆ, ತಾಯಿಯರನ್ನು ಕಳೆದುಕೊಂಡ ಕುಂದಾಪುರ ತಾಲೂಕು ಜಡ್ಕಲ್ ಸಮೀಪದ ಜನ್ನಾಲ್‌ನ ಅಜಿತ್ ಶೆಟ್ಟಿ ಮತ್ತು ಕು. ಅರ್ಚನ ಶೆಟ್ಟಿ ಅವರ ಶೈಕ್ಷಣಿಕ ವೆಚ್ಚವನ್ನು ಭರಿಸುವ ಸಲುವಾಗಿ ೨೦೧೪-೧೫ನೇ ಶೈಕ್ಷಣಿಕ ವರ್ಷದಲ್ಲಿ ರೂ. ೩೦೦೦ ಮತ್ತು ೨೦೧೫-೧೬ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ. ಪ್ರಸ್ತುತ ಅಜಿತ್ ದ್ವಿತೀಯ ಬಿ.ಕಾಂ ತರಗತಿಯಲ್ಲಿ ಮತ್ತು ಕು. ಅರ್ಚನ ಪ್ರಥಮ ಪಿ.ಯು.ಸಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಬ್ಬರೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
  • ಆರ್ಥಿಕವಾಗಿ ಹಿಂದುಳಿದ ಮತ್ತು ತಂದೆ, ತಾಯಿಯರನ್ನು ಕಳೆದುಕೊಂಡ ಕುಂದಾಪುರ ತಾಲೂಕು ಜನ್ನಾಲ್‌ನ ಅಜಿತ್ ಶೆಟ್ಟಿ ಮತ್ತು ಕು. ಅರ್ಚನ ಶೆಟ್ಟಿ ಅವರ ಶೈಕ್ಷಣಿಕ ವೆಚ್ಚವನ್ನು ಭರಿಸುವ ಸಲುವಾಗಿ ೨೦೧೫-೧೬ ಮತ್ತು ೨೦೧೬-೧೭ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು ರೂ. ೨೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಮತ್ತು ತಂದೆ, ತಾಯಿಯರನ್ನು ಕಳೆದುಕೊಂಡ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕ್ರೋಢಾಬೈಲೂರಿನ ವಿದ್ಯಾರ್ಥಿನಿ ಕು. ಸಾಕ್ಷಿ ಶೆಟ್ಟಿ ಅವರ ಶೈಕ್ಷಣಿಕ ವೆಚ್ಚವನ್ನು ಭರಿಸುವ ಸಲುವಾಗಿ ೨೦೧೫-೧೬ ಮತ್ತು ೨೦೧೬-೧೭ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು ರೂ. ೨೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.

ಮಾಂಗಲ್ಯ ಸೂತ್ರ:

ಬಂಟ ಸಮುದಾಯದ ಬಡ ಕುಟುಂಬಗಳ ಪಾಲಿಗೆ ತಮ್ಮ ಹೆಣ್ಣು ಮಕ್ಕಳ ವಿವಾಹದ ನಿರ್ವಹಣೆ ತೀವೃ ಸ್ವರೂಪದ ಸವಾಲಾಗಿ ಪರಿಣಮಿಸಿದೆ. ಬಂಟ ಸಮುದಾಯದೊಳಗಿನ ಆರ್ಥಿಕ ಅಂತರ ಹೆಚ್ಚಾದಂತೆ ಈ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ತಾಲೂಕಿನ ವಿಭಿನ್ನ ಪ್ರದೇಶಗಳಲ್ಲಿನ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳನ್ನು ಪ್ರತಿನಿಧಿಸುವ ಯುವತಿಯರ ವಿವಾಹಕ್ಕೆ ಸಹಾಯಹಸ್ತ ಚಾಚುವ ಕಿರು ಕಾಳಜಿಯನ್ನು ಸಂಘವು ತನ್ನ ಕ್ರಿಯಾಚರಣೆಯ ಭಾಗವಾಗಿ ಅಂತರ್ಗತಗೊಳಿಸಿಕೊಂಡಿದೆ. ಮುಖ್ಯವಾಗಿ ಸಂಘದ ಮಾಂಗಲ್ಯ ಸೂತ್ರ ಯೋಜನೆಯ ಅಡಿಯಲ್ಲಿ ತಂದೆ ಯಾ ತಾಯಿಯರನ್ನು ಕಳೆದುಕೊಂಡ ಯುವತಿಯರ ವಿವಾಹ ಆಯೋಜನೆಗೆ ಆದ್ಯತೆಯ ಮೇರೆಗೆ ಗಮನ ಹರಿಸಲಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಘದ ವತಿಯಿಂದ ಈ ಯೋಜನೆಯಲ್ಲಿ ಆರ್ಥಿಕ ನೆರವನ್ನು ಪಡೆದ ಪ್ರಮುಖರ ವಿವರ ಈ ಕೆಳಗಿನಂತಿದೆ.

  • ಆರ್ಥಿಕವಾಗಿ ಹಿಂದುಳಿದ ಅಂಪಾರು ಗ್ರಾಮದ ಶಾನ್ಕಟ್ಟಿನ ಕು. ಸುಜಾತ ಅವರ ವಿವಾಹಕ್ಕೆ ರೂ. ೫,೦೦೦ ನೆರವು.
  • ತಂದೆ, ತಾಯಿಯರನ್ನು ಕಳೆದುಕೊಂಡ ಬೆಳ್ಳಾಲ ಗ್ರಾಮದ ಗೀತಾ ಶೆಟ್ಟಿ ಅವರ ವಿವಾಹಕ್ಕೆ ರೂ. ೧೦,೦೦೦ ನೆರವು.
  • ವಾಲ್ತೂರು ಪರಿಸರದ ತಂದೆಯನ್ನು ಕಳೆದುಕೊಂಡ ಸುಮಿತ್ರಾ ಶೆಟ್ಟಿ ಅವರ ವಿವಾಹಕ್ಕೆ ರೂ. ೧೦,೦೦೦ ನೆರವು.
  • ಬೆಂಗಳೂರಿನ ಬಂಟರ ಸಂಘದ ಮಾಂಗಲ್ಯ ಸೂತ್ರ ಯೋಜನೆಗೆ ಅರ್ಜಿ ಸಲ್ಲಿಸಿದ ಹಲವು ಫಲಾನುಭವಿಗಳ ಕೋರಿಕೆಯ ಮೇರೆಗೆ ಸಂಘದ ವತಿಯಿಂದ ಶಿಫಾರಸ್ಸು ಮಾಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಪ್ರತಿನಿಧಿಸುತ್ತಿರುವ ಕುಂದಾಪುರ ತಾಲೂಕು ಸಿದ್ದಾಪುರ ಚೌಕಿಕಡು ರೇವತಿ ಶೆಟ್ಟಿ ಅವರ ವಿವಾಹದ ಸಂದರ್ಭದಲ್ಲಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಪ್ರತಿನಿಧಿಸುತ್ತಿರುವ ಕುಂದಾಪುರ ತಾಲೂಕು ಹೆಂಗವಳ್ಳಿಯ ಜ್ಯೋತಿ ಶೆಟ್ಟಿ ಅವರ ವಿವಾಹದ ಸಂದರ್ಭದಲ್ಲಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಪ್ರತಿನಿಧಿಸುತ್ತಿರುವ ಕುಂದಾಪುರ ತಾಲೂಕು ಕೆದೂರಿನ ಸುಪ್ರಿತಾ ಶೆಟ್ಟಿ ಅವರ ವಿವಾಹದ ಸಂದರ್ಭದಲ್ಲಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಪ್ರತಿನಿಧಿಸುತ್ತಿರುವ ಕುಂದಾಪುರ ತಾಲೂಕು ಅಸೋಡಿನ ಮಮತ ಶೆಟ್ಟಿ ಅವರ ವಿವಾಹದ ಸಂದರ್ಭದಲ್ಲಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.

ಆರೋಗ್ಯ ಭಾಗ್ಯ:

ಕುಂದಾಪುರ ತಾಲೂಕು ಯುವ ಬಂಟರ ಸಂಘವು ತನ್ನ ಉದ್ಘಾಟನೆಗೂ ಪೂರ್ವದಲ್ಲಿ ಹಮ್ಮಿಕೊಂಡ ಸಮಾಜಮುಖಿ ಯೋಜನೆ ‘ಆರೋಗ್ಯ ಭಾಗ್ಯ’. ಬಂಟ ಸಮುದಾಯವನ್ನು ಪ್ರತಿನಿಧಿಸುವ ತೀವೃ ಸ್ವರೂಪದ ಆರೋಗ್ಯ ಸಂಬಂಧಿ ಸಮಸ್ಯಗಳಿಂದ ಬಳಲುತ್ತಿರುವ ವ್ಯಕ್ತಿ ಯಾ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗಬೇಕೆಂಬ ಕಳಕಳಿಯ ಹಿನ್ನೆಲೆಯಲ್ಲಿ ರೂಪುಗೊಂಡ ಯೋಜನೆ ಇದು. ಮುಖ್ಯವಾಗಿ ಪ್ರಾಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಬಡ ವ್ಯಕ್ತಿಗಳಿಂದ ಬಂದ ಮನವಿಯನ್ನು ಸ್ವೀಕರಿಸಿ, ವಿವಿಧ ಸಂದರ್ಭಗಳಲ್ಲಿ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆರೋಗ್ಯ ಭಾಗ್ಯ ಯೋಜನೆಯ ಅಡಿಯಲ್ಲಿ ಆರ್ಥಿಕ ನೆರವು ಪಡೆದ ಫಲಾನುಭವಿಗಳ ವಿವರ ಈ ಕೆಳಗಿನಂತಿದೆ.

  • ಆರ್ಥಿಕವಾಗಿ ಹಿಂದುಳಿದ ಮತ್ತು ತೀವೃ ಸ್ವರೂಪದ ಆರೋಗ್ಯ ಸಂಬಂಧಿ ಸಮಸ್ಯಗಳಿಂದ ಬಳಲುತ್ತಿರುವ ಹೊಸಂಗಡಿಯ ದಿನಕರ ಶೆಟ್ಟಿ ಅವರ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಮತ್ತು ತೀವೃ ಸ್ವರೂಪದ ಆರೋಗ್ಯ ಸಂಬಂಧಿ ಸಮಸ್ಯಗಳಿಂದ ಬಳಲುತ್ತಿರುವ ಕರ್ಕುಂಜೆ ಗ್ರಾಮದ ಬಾಲಕೃಷ್ಣ ಶೇಟ್ಟಿ ಅವರ ಮಗ ರಜತ್ ಶೆಟ್ಟಿ ಅವರ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೫೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದು ತಂದೆಯನ್ನು ಕಳೆದುಕೊಂಡ ಮತ್ತು ಆರೋಗ್ಯ ಸಂಬಂಧಿ ಸಮಸ್ಯಗಳಿಂದ ಬಳಲುತ್ತಿರುವ ಅಂಪಾರು ಗ್ರಾಮದ ಶರಣ ಶೆಟ್ಟಿ ಅವರ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೫೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಮತ್ತು ಇಳಿ ವಯಸ್ಸಿನಲ್ಲಿ ಕಾಲು ಮುರಿತಕೊಳ್ಳಗಾಗಿ ಬಳಲುತ್ತಿರುವ ಕುಂದಾಪುರದ ಜಿಗಾರಿನ ಶ್ರೀಮತಿ ದೇವಕಿ ಶೆಟ್ಟಿ ಅವರ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೫೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಅರೆಶಿರೂರಿನ ಮೂಕಾಂಬಿಕಾ ಪ್ರೌಢಶಾಲೆಯ ವಿದ್ಯಾರ್ಥಿ ಆಶೇಷ ಶೆಟ್ಟಿ ಅಪಘಾತದಲ್ಲಿ ತೀವೃ ಸ್ವರೂಪದ ತೊಂದರೆಯನ್ನು ಅನುಭವಿಸಿದ್ದು ಆತನ ವ್ಯದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦೦೦೦ ಮೊತ್ತದ ಆರ್ಥಿಕ ನೆರವನ್ನು ನೀಡಲಾಗಿದೆ.
  • ಕಳೆದ ೨೪ ವರ್ಷಗಳಿಂದ ದೈಹಿಕ ಅಂಗವೈಕಲ್ಯ ಸಮಸ್ಯೆಯಿಂದ ಬಳಲುತ್ತಿರುವ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಸಾರ್ಕಲ್‌ನ ಜಯರಾಮ ಶೆಟ್ಟಿ ಅವರಿಗೆ ಆರ್ಥಿಕ ನೆರವು ನೀಡಲಾಗಿದ್ದು ಸಂಘದ ಮಹಾಪೋಷಕರಾದ ಕಂದಾವರ ಕೆಳಾಮನೆಯ ಸತೀಶ್ ಶೆಟ್ಟಿ ಬಿ. ಇ ಇವರು ರೂ. ೨೫,೦೦೦ ಮೊತ್ತದ ಚಕ್‌ನ್ನು ಜಯರಾಮ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
  • ಸುಮಾರು ನಾಲ್ಕು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಬೆನ್ನು ಹುರಿಗೆ ತೀವ್ರ ಗಾಯಗೊಂಡು ತಿರುಗಾಡಲಾರದ ಸ್ಥಿತಿಯಲ್ಲಿರುವ ಸಳ್ವಾಡಿ ನೀರೋಣಿಮನೆ ಬಾಬು ಶೆಟ್ಟಿ ಅವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
  • ರಕ್ತ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ತಾಲೂಕು ರಟ್ಟಾಡಿಯ ವಿದ್ಯಾರ್ಥಿ ಆಶೀಶ್ ಶೆಟ್ಟಿ ಅವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
  • ಕಿಡ್ನಿ ವೈಫಲ್ಯದ ತೊಂದರೆಯಿಂದ್ದ ಬಳಲುತ್ತಿರುವ ಕುಂದಾಪುರ ತಾಲೂಕು ಕಾಲ್ತೋಡು ಗ್ರಾಮದ ನೀರ್ಕುಳಿ ಪದ್ಮಾವತಿ ಶೆಟ್ಟಿ ಅವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
  • ತೀವ್ರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿರುವ ಕುಂದಾಪುರ ತಾಲೂಕು ಎಲ್ಲೂರು ಗುಡ್ಡಿಮನೆ ಸಾಕು ಶೆಡ್ತಿ ಅವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
  • ತೀವ್ರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿರುವ ಕುಂದಾಪುರ ತಾಲೂಕು ಅಂಪಾರು ಜಯರಾಮ ಶೆಟ್ಟಿ ಅವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
  • ತೀವ್ರ ಸ್ವರೂಪದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಕುಂದಾಪುರ ತಾಲೂಕು ಆಲೂರು ಗ್ರಾಮದ ರಘುರಾಮ ಶೆಟ್ಟಿ ಅವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
  • ರಸ್ತೆ ಅಪಘಾತಕ್ಕೀಡಾದ ಕುಂದಾಪುರ ತಾಲೂಕು ತೊಂಬಟ್ಟು ಗ್ರಾಮದ ದಿನೇಶ್ ಶೆಟ್ಟಿ ಅವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ರೂ. ೧೦,೦೦೦ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.

ರಕ್ತದಾನ ಶಿಬಿರ:

ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘ, ಬಂಟರ ಯಾನೆ ನಾಡವರ ಮಾತೃ ಸಂಘ, ಕುಂದಾಪುರ ಮತ್ತು ಉಡುಪಿ ಜಿಲ್ಲಾ ಏಡ್ಸ್ ನಿರ್ಮೂಲನ ಮತ್ತು ನಿಯಂತ್ರಣ ಘಟಕ ಇವುಗಳ ಸಹಯೋಗದೊಂದಿಗೆ ಕುಂದಾಪುರದ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು. ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಅವರು ರಕ್ತದಾನ ಮಾಡುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಏಡ್ಸ್ ನಿರ್ಮೂಲನ ಮತ್ತು ನಿಯಂತ್ರಣ ಘಟಕದ ಅಧ್ಯಕ್ಷ ಕಾವ್ರಾಡಿ ಮುತ್ತಯ್ಯ ಹೆಗ್ಡೆ, ವೈದ್ಯಾಧಿಕಾರಿ ಡಾ. ಎಚ್ ಎಸ್ ಮಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘ, ಕುಂದಾಪುರ ಇದರ ಸಹಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂದಾಪುರದ ಸಹಾಯಕ ಆಯುಕ್ತರಾದ ಚಾರುಲತಾ ಸೋಮಲ್ ಸೇರಿದಂತೆ ೧೮ರಿಂದ ೫೦ ವರ್ಷದೊಳಗಿನ ಹಲವು ಮಂದಿ ಈ ಶಿಬಿರದಲ್ಲಿ ರಕ್ತದಾನ ಮಾಡಿದರು.

ರಕ್ತದಾನ ಶಿಬಿರ-2015

ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ೨೦೧೫ರ ಅಕ್ಟೋಬರ್ ೧೦ರಂದು ಬೆಳಿಗ್ಗೆ ೧೦.೩೦ಕ್ಕೆ ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ನಿಯಮಗಳನ್ವಯ ೧೮ರಿಂದ ೫೦ ವರ್ಷದೊಳಗಿನ ೫೦ ಕೆ. ಜಿಗಿಂತ ಹೆಚ್ಚಿಗೆ ತೂಕವಿರುವ ಮತ್ತು ೧೨.೫ಕ್ಕಿಂತ ಹೆಚ್ಚಿನ ಹಿಮೋಗ್ಲೋಬಿನ್ ಹೊಂದಿರುವ ಆರೋಗ್ಯವಂತ ಪುರುಷ ಮತ್ತು ಮಹಿಳೆಯರು ಈ ಶಿಬಿರದಲ್ಲಿ ರಕ್ತದಾನ ಮಾಡಿದರು. ವಿಭಿನ್ನ ಸಮುದಾಯವನ್ನು ಪ್ರತಿನಿಧಿಸುವ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕ, ಯುವತಿಯರು ಆದ್ಯತೆಯ ಮೇರೆಗೆ ದೊಡ್ಡ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿದರು.
ಈ ಶಿಬಿರವನ್ನು ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್‌ನ ಆಡಳಿತ ನಿರ್ದೇಶಕ ಡಾ. ರಂಜನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಬಾಬು ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರು, ಬೈಂದೂರು, ಶ್ರೀ ಸದಾನಂದ ಶೆಟ್ಟಿ ಕೆದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು. ಕುಂದಾಪುರ, ಶ್ರೀ ಜಯಕರ ಶೆಟ್ಟಿ, ಅಧ್ಯಕ್ಷರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಕ್ತದಾನ ಶಿಬಿರದ ಸಂಚಾಲಕರುಗಳಾದ ಚೇತನ್ ಕುಮಾರ್ ಶೆಟ್ಟಿ ಕೊವಾಡಿ ಮತ್ತು ಪ್ರದೀಪ್ ಕುಮಾರ್ ಶೆಟ್ಟಿ ಬೆಳ್ಳಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಕ್ತದಾನ ಶಿಬಿರ-2016

ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ೨೦೧೭ರ ಫೆಬ್ರವರಿ ೨೫ರಂದು ಬೆಳಿಗ್ಗೆ ೧೦.೩೦ಕ್ಕೆ ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಈ ಶಿಬಿರ ಸಂಪನ್ನಗೊಂಡಿತು. ರೆಡ್‌ಕ್ರಾಸ್ ಸಂಸ್ಥೆಯ ನಿಯಮಗಳನ್ವಯ ೧೮ರಿಂದ ೫೦ ವರ್ಷದೊಳಗಿನ ೫೦ ಕೆ. ಜಿಗಿಂತ ಹೆಚ್ಚಿಗೆ ತೂಕವಿರುವ ಮತ್ತು ೧೨.೫ಕ್ಕಿಂತ ಹೆಚ್ಚಿನ ಹಿಮೋಗ್ಲೋಬಿನ್ ಹೊಂದಿರುವ ಆರೋಗ್ಯವಂತ ಪುರುಷ ಮತ್ತು ಮಹಿಳೆಯರು ಈ ಶಿಬಿರದಲ್ಲಿ ರಕ್ತದಾನ ಮಾಡಿದರು. ವಿಭಿನ್ನ ಸಮುದಾಯವನ್ನು ಪ್ರತಿನಿಧಿಸುವ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕ, ಯುವತಿಯರು ಆದ್ಯತೆಯ ಮೇರೆಗೆ ದೊಡ್ಡ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿದರು.

ಬೆಂಗಳೂರಿನ ಎಚ್‌ಸಿಜಿ ಎಂಐಒ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪ್ರಮೋದ್ ಚಿಂದರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕ್ಯಾನ್ಸರ್ ಉಂಟುಮಾಡುವ ಪರಿಣಾಮಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರ, ಇದರ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಅವರು ಶಿಬಿರವನ್ನು ಉದ್ಘಾಟಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ. ಅಂಪಾರು ವಸಂತ್ ಕುಮಾರ್ ಶೆಟ್ಟಿ, ಶ್ರೀ ಮಹಬಲೇಶ್ವರ ಕ್ಲಿನಿಕ್ ಕುಂದಾಪುರ. ಸಂಪಿಗೇಡಿ ಸಂಜೀವ ಶೆಟ್ಟಿ, ಸಂಚಾಲಕರು, ಬಂಟರ ಯಾನೆ ನಾಡವರ ಮಾತೃ ಸಂಘ, ಕುಂದಾಪುರ. ಡಾ. ಎನ್.ಪಿ ನಾರಾಯಣ ಶೆಟ್ಟಿ, ಪ್ರಾಂಶುಪಾಲರು ಭಂಡಾರ್‌ಕಾರ್ಸ್ ಕಾಲೇಜು, ಕುಂದಾಪುರ, ಡಾ. ದಿನೇಶ್ ಕುಮಾರ್ ಶೆಟ್ಟಿ, ಮೂಳೆ ತಜ್ಞರು, ಚಿನ್ಮಯಿ ಆಸ್ಪತ್ರೆ, ಕುಂದಾಪುರ, ಡಾ. ಶ್ರೀಕಾಂತ ಶೆಟ್ಟಿ, ನೇತ್ರ ತಜ್ಞರು, ನ್ಯೂ ಮೆಡಿಕಲ್ ಸೆಂಟರ್, ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಕ್ತದಾನ ಶಿಬಿರದ ಸಂಚಾಲಕರುಗಳಾದ ಚೇತನ್ ಕುಮಾರ್ ಶೆಟ್ಟಿ ಕೊವಾಡಿ ಮತ್ತು ಪ್ರದೀಪ್ ಕುಮಾರ್ ಶೆಟ್ಟಿ ಬೆಳ್ಳಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.