ಬಂಟರ ಕ್ರೀಡೋತ್ಸವ:

ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ೨೦೧೫ರ ಎಪ್ರಿಲ್ ೪ ಮತ್ತು ೫ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಂಟರ ಕ್ರೀಡೋತ್ಸವ ನಡೆಯಿತು. ಪುರುಷರ ವಿಭಾಗದಲ್ಲಿ ಕ್ರಿಕೆಟ್, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ಮತ್ತು ಮಹಿಳೆಯರ ವಿಭಾಗದಲ್ಲಿ ತ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸುವ ಬಂಟ ಸಮುದಾಯದ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಗಳಾದರು.

ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಕುಂದಾಪುರದ ಬಂಟರ ಯಾನೆ ನಾಡವರ ಮಾತೃ ಸಂಘದ ಸಹಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಉಡುಪಿ ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕೋಟೇಶ್ವರದ ಸಹನಾ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಸುರೇಂದ್ರ ಶೆಟ್ಟಿ, ಪ್ರಥಮದರ್ಜೆ ಗುತ್ತಿಗೆದಾರರಾದ ಟಿ. ಎನ್ ರಘುರಾಮ ಶೆಟ್ಟಿ ಹಟ್ಟಿಯಂಗಡಿ, ವಿಜಯಾನಂದ ಶೆಟ್ಟಿ ಹಳ್ನಾಡು ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಈ ಕ್ರೀಡೋತ್ಸವದ ಅಂಗವಾಗಿ ಕರಾವಳಿ ಬಂಟರ ಬಳಗ ಪತ್ರಿಕೆ ಹೊರತಂದ ವಿಶೇಷ ಸಂಚಿಕೆಯನ್ನು ಉಡುಪಿ ಬಂಟರ ಸಂಘದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅನಾವರಣಗೊಳಿಸಿದರು. ಸಂಘದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉಮೆಶ್ ಶೆಟ್ಟಿ ಶಾನ್ಕಟ್ಟು ಕೋಶಾಧಿಕಾರಿ ಸುರೇಶ್ ಶೆಟ್ಟಿ, ಕ್ರೀಡಾ ವೇದಿಕೆಯ ಸಂಚಾಲಕ ಸುಕೇಶ್ ಶೆಟ್ಟಿ ಹೊಸ್ಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು ಪ್ರಕಾಶ್ ಶೆಟ್ಟಿ ಬೆಳಗೋಡು ಕಾರ್ಯಕ್ರಮ ನಿರ್ವಹಿಸಿದರು.
ಕ್ರೀಡೋತ್ಸವದ ಸಮಾರೋಪ ಸಮಾರಂಭವು ಎಪ್ರಿಲ್ ೫ರಂದು ಸಂಜೆ ನಡೆಯಿತು. ಕುಂದಾಪುರದ ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ. ನಾರಾಯಣ ಶೆಟ್ಟಿ ಅವರು ಸಮಾರೋಪ ಭಾಷಣ ಮಾಡಿದರು. ಮಾನಸಿಕ ಸ್ಥಿಮಿತವನ್ನು ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ಕ್ರೀಡೆ ಬಹುಮುಖ್ಯ ಪಾತ್ರವಹಿಸುತ್ತದೆ. ದೈಹಿಕವಾಗಿಯೂ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ವೈಯುಕ್ತಿಕ ನೆಲೆಯಿಂದ ಸಂಘಟನೆಯ ನೆಲೆಯತ್ತ ಪರಿಭ್ರಮಿಸಲು ಇಂತಹ ಕ್ರೀಡೋತ್ಸವಗಳು ಸಹಕಾರಿಯಾಗಲಿವೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಿದ್ದರು. ಕುಂದಾಪುರ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಮುಂಬೈನ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ರತ್ನಾಕರ ಜಿ. ಶೆಟ್ಟಿ, ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಥಮದರ್ಜೆ ಗುತ್ತಿಗೆದಾರ ಟಿ.ಎನ್ ರವಿರಾಜ ಶೆಟ್ಟಿ ಹಟ್ಟಿಯಂಗಡಿ, ಕುಂದಾಪುರ ತಾಲೂಕು ಬಂಟರ ಯಾನೆ ನಾಡವರ ಮಾತೃಸಂಘದ ಸಹಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಪ್ರಥಮದರ್ಜೆ ಗುತ್ತಿಗೆದಾರ ವಿಜಯಾನಂದ ಶೆಟ್ಟಿ ಹಳ್ನಾಡು, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎ. ಬಿ. ಶೆಟ್ಟಿ, ಬಂಟ್ಸ್ ಹೋಟೆಲ್ ಮಾಲೀಕರ ಸಂಘ. ಬೆಂಗಳೂರು ಇದರ ಮಾಜಿ ಅಧ್ಯಕ್ಷ ಕೆ. ಗೋಪಾಲ ಶೆಟ್ಟಿ ಕೊರ್ಗಿ, ಶ್ರೀ ದುರ್ಗಾ ಕನ್ಸ್ಟ್ರಕ್ಷನ್ ದಾಂಡೇಲಿ ಇದರ ಮಾಲಕ ಜಿ. ಪ್ರಕಾಶ್ ಶೆಟ್ಟಿ ಶೇರ್ಡಿ, ಬಂಟರ ಯಾನೆ ನಾಡವರ ಉಪಸಂಘ ಕಾಲ್ತೋಡು ಇದರ ಅಧ್ಯಕ್ಷ ವಾಜುರಾಜ ಶೆಟ್ಟಿ, ವಾಸೈ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಟಿ. ಶಂಕರ ಶೆಟ್ಟಿ, ಕೋಡಿ ಬ್ಯಾರಿಸ್ ಶಿಕ್ಷಣ ಸಂಸ್ಥೆಯ ಅಧ್ಯಾಪಕ ಜಯಶೀಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ತಾಲೂಕು ಯುವ ಬಂಟರ ಸಂಘದ ಪ್ರದಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಶಾನ್ಕಟ್ಟು ಕ್ರೀಡೆಗಳಲ್ಲಿ ವಿಜೇತರಾದವರ ಪಟ್ಟಿ ಓದಿದರು. ಯುವ ಬಂಟರ ಸಂಘದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಕ್ರೀಡಾ ವೇದಿಕೆ ಸಂಚಾಲಕ ಸುಕೇಶ್ ಶೆಟ್ಟಿ ಹೊಸ್ಮಠ ವಂದಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಶಾಶ್ವತ ಫಲಕ ನೀಡಲಾಯಿತು. ಅವುಗಳ ವಿವರ ಹೀಗಿದೆ. ಕ್ರಿಕೆಟ್ (ಪ್ರಥಮ: ರೂ. ೨೨,೨೨೨, ದ್ವಿತೀಯ: ರೂ. ೧೫,೫೫೫), ವಾಲಿಬಾಲ್ (ಪ್ರಥಮ: ರೂ. ೧೫.೫೫೫, ದ್ವಿತೀಯ: ರೂ. ೯೯೯೯), ಹಗ್ಗಜಗ್ಗಾಟ (ಪ್ರಥಮ: ರೂ. ೯೯೯೯, ದ್ವಿತೀಯ: ರೂ. ೭೭೭೭ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ), ತ್ರೋಬಾಲ್ (ಪ್ರಥಮ: ರೂ. ೯೯೯೯, ದ್ವಿತೀಯ: ರೂ. ೭೭೭೭). ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ ಕ್ರಿಕೆಟ್‌ಗೆ ರೂ. ೨೦೦೦ ಹಾಗೂ ಇತರ ಕ್ರೀಡೆಗಳಿಗೆ ರೂ. ೧೦೦೦ ನಿಗದಿಪಡಿಸಲಾಗಿತ್ತು.

ಎರಡು ದಿನಗಳ ಕಾಲ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ತ್ರೋಬಾಲ್‌ನಲ್ಲಿ ಬಂಟರ ಸಂಘ, ಬ್ರಹ್ಮಾವರ ಪ್ರಥಮ ಸ್ಥಾನವನ್ನು ಮತ್ತು ಯುವ ಬಂಟರ ಸಂಘ, ಉಡುಪಿ ದ್ವಿತೀಯ ಸ್ಥಾನವನ್ನು ಪಡೆದರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಯುವ ಬಂಟರ ಸಂಘ ಉಡುಪಿ ಪ್ರಥಮ ಹಾಗೂ ಬಲಾಡಿ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆದರು. ವಾಲಿಬಾಲ್‌ನಲ್ಲಿ ಅಥರ್ವ ಮಧುವನ ಫ್ರೆಂಡ್ಸ್, ತೆಕ್ಕಟ್ಟೆ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಎಎಸ್‌ಎಸ್ ಕೋಸ್ಟಲ್ ಕಟ್ಕೆರೆ ತಂಡ ಪಡೆದುಕೊಂಡರು. ಪುರುಷರ ಹಗ್ಗಜಗ್ಗಾಟದಲ್ಲಿ ಅಮೃತ್ ಸ್ಪೋಟ್ಸ್ ಪ್ರಥಮ ಸ್ಥಾನ ಪಡೆದರೆ, ಸಂತೋಷ್ ಶೆಟ್ಟಿ ಪ್ರೆಂಡ್ಸ್ ಬಲಾಡಿ ತಂಡ ದ್ವಿತೀಯ ಸ್ಥಾನಿಗಳಾದರು. ಕ್ರಿಕೆಟ್ ಸ್ಪರ್ಧೆಯಲ್ಲಿ ತೆಕ್ಕಟ್ಟೆಯ ಶ್ರೀರಾಮ ಅಥರ್ವ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ ಹನಿಬ್ಲೂ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು.

ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆದ ಈ ಕ್ರೀಡಾಕೂಟದಲ್ಲಿ ಬಂಟ ಸಮುದಾಯವನ್ನು ಪ್ರತಿನಿಧಿಸುವ ಸುಮಾರು ಏಳು ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದರು. ಉಡುಪಿ ಜಿಲ್ಲೆಯ ನಾನಾ ಕಡೆಗಳಿಂದ ತಂಡಗಳು ಆಗಮಿಸಿದ್ದು ಈ ಉತ್ಸವಕ್ಕೆ ವಿಶೇಷ ಮೆರುಗು ತಂದಿತ್ತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತರಾದ ಅಧಿಕಾರಿವರ್ಗ ಈ ಕ್ರೀಡಾಕೂಟದ ನಿರ್ಣಾಯಕರಾಗಿ ಸಹಕರಿಸಿದರು. ಅತ್ಯಾಕರ್ಷಕ ಶೈಲಿಯ ವೀಕ್ಷಕ ವಿವರಣೆ ಪ್ರೇಕ್ಷಕವರ್ಗವನ್ನು ಮಂತ್ರಮಗ್ನವಾಗಿಸಿತು. ಎಲ್ಲಾ ಕ್ರೀಡಾಪಟುಗಳಿಗೆ, ಅಧಿಕಾರಿವರ್ಗದವರಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಎರಡೂ ದಿನಗಳ ಕಾಲ ಸಂಘದ ವತಿಯಿಂದ ಊಟ-ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಬಂಟ ಮತ್ತು ಇತರ ಸಮುದಾಯವನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಈ ಕ್ರೀಡಾಕೂಟಕ್ಕೆ ಆಗಮಿಸಿ, ಶುಭ ಹಾರೈಸಿದರು. ಬಂಟ ಸಮುದಾಯವನ್ನು ಪ್ರತಿನಿಧಿಸುವ ಅನೇಕ ಮಂದಿ ಉದ್ಯಮಿಗಳು, ಗುತ್ತಿಗೆದಾರರು ಮತ್ತು ಇತರರು ಈ ಕ್ರೀಡಾಕೂಟದ ಸಂಘಟನೆ ಮತ್ತು ನಿರ್ವಹಣೆಗೆ ಉದಾರ ದೇಣಿಗೆ ನೀಡಿ ಸಹಕರಿಸಿದ್ದಾರೆ. ಪತ್ರಿಕೆ ಮತ್ತು ಇತರ ಮಾಧ್ಯಮಗಳು ವಿಶೇಷ ನೆಲೆಯಲ್ಲಿ ಪ್ರಚಾರ ನೀಡಿ ಸಹಕರಿಸಿವೆ. ಎರಡೂ ದಿನಗಳ ಕಾಲ ಸಹಸ್ರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಈ ಕ್ರೀಡೋತ್ಸವವನ್ನು ಅತೀವವಾಗಿ ಸಂಭ್ರಮಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಹೊಸ್ಮಠ ಅವರ ಸಂಚಾಲಕತ್ವದಲ್ಲಿ ಈ ಕ್ರೀಡಾಕೂಟ ಅತ್ಯಂತ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

ಬಂಟರ ಕ್ರೀಡೋತ್ಸವ-2016

ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ೨೦೧೬ರ ಎಪ್ರಿಲ್ ೧೬ ಮತ್ತು ೧೭ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಬೃಹತ್ ಮಟ್ಟದ ಬಂಟರ ಕ್ರೀಡೋತ್ಸವ ನಡೆಯಿತು. ಬಂಟ ಸಮುದಾಯವನ್ನು ಪ್ರತಿನಿಧಿಸುವ ಕರ್ನಾಟಕದ ಒಳಹೊರಗಿನ ಸಹಸ್ರಾರು ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಪುರುಷರ ವಿಭಾಗದಲ್ಲಿ ಕ್ರಿಕೆಟ್, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ಮತ್ತು ಮಹಿಳೆಯರ ವಿಭಾಗದಲ್ಲಿ ತ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಮಾನಸಿಕ ಸ್ಥಿಮಿತವನ್ನು ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ಕ್ರೀಡೆ ಬಹುಮುಖ್ಯ ಪಾತ್ರವಹಿಸುತ್ತದೆ. ದೈಹಿಕವಾಗಿಯೂ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ವೈಯುಕ್ತಿಕ ನೆಲೆಯಿಂದ ಸಂಘಟನೆಯ ನೆಲೆಯತ್ತ ಪರಿಭ್ರಮಿಸಲು ಇಂತಹ ಕ್ರೀಡೋತ್ಸವಗಳು ಸಹಕಾರಿಯಾಗಲಿವೆ ಎಂದರು. ಉದ್ಯಮಿ ಗುರ್ಮ ಸುರೇಶ್ ಶೆಟ್ಟಿ ಆಶಯ ಭಾಷಣ ಮಾಡಿದರು. ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕುಂದಾಪುರದ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಸಂಪಿಗೇಡಿ ಸಂಜೀವ ಶೆಟ್ಟಿ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷ ಎನ್. ಅಶೋಕ್ ಶೆಟ್ಟಿ, ಉದ್ಯಮಿಗಳಾದ ಬಿ. ಆನಂದರಾಮ ಶೆಟ್ಟಿ, ವಿನಯ್ ಕುಮಾರ್ ಶೆಟ್ಠಿ, ಉಪೇಂದ್ರ ಶೆಟ್ಢಿ ಜಪ್ತಿ, ಚಂದ್ರಶೇಖರ ಶೆಟ್ಟಿ, ಅಂತರಾಷ್ಥ್ರೀಯ ಕ್ರೀಡಾಪಟು ಕಾಪು ಪ್ರೇಮನಾಥ ಶೆಟ್ಟಿ ಮೊದಲಾದವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಗೊಂಡ ಬಂಟ ಸಮುದಾಯದ ಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅವಿನಾಶ್ ರೈ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ಎಪ್ರಿಲ್ ೧೭ರಂದು ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮಗಳು ನಡೆದವು. ಮುಂಬೈ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಉಳ್ತೂರು ಮೋಹನದಾಸ ಶೆಟ್ಟಿ ಸಮಾರೋಪ ಭಾಷಣ ಮಾಡಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಸಹಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಉದ್ಯಮಿಗಳಾದ ಆuದೀಶ್ ಶೆಟ್ಟಿ, ಬಿ. ಎಸ್ ಸುರೇಶ್ ಶೆಟ್ಟಿ, ಶೆಡಿಮನೆ ಪ್ರಕಾಶ್ ಶೆಟ್ಟಿ, ದೀಪಕ್ ಶೆಟ್ಟಿ ಬಾರ್ಕೂರು, ಬೇಳೂರು ರಾಘವೇಂದ್ರ ಶೆಟ್ಟಿ, ರಾಷ್ಟಮಟ್ಟದ ಕ್ರೀಡಾಪಟು ಕೆ. ಚಂದ್ರೇಶ್ ಶೆಟ್ಟಿ, ಕೈಲಾಡಿ ಚಂದ್ರಶೇಖರ ಶೆಟ್ಟಿ ಮೊದಲಾದವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅವಿನಾಶ್ ರೈ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.