ಸಂಘದ ವತಿಯಿಂದ ಕ್ಯಾನ್ಸರ್ ರೋಗಿಗೆ ಸಹಾಯ
ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಕೊಂಗೆರಿ ನಿವಾಸಿ ಶ್ರೀಮತಿ ಉಷಾ ಶೆಟ್ಟಿ 32 ವರ್ಷ ಕಳೆದ ಹಲವು ದಿನಗಳಿಂದ ಕ್ಯಾನ್ಸರ್ ಎನ್ನುವ ಮಹಾಮಾರಿಗೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದು ಪ್ರಸ್ತುತ ಮಣಿಪಾಲ್ ಆಸ್ಪತ್ರೆ ಗೋವಾ ದಲ್ಲಿ ಚಿಕಿಸ್ಸೆ ಪಡೆದು ಕೊಳ್ಳುತ್ತಿದ್ದಾರೆ. ಇವರ ಪತಿ ಗೋವಾದ ಹೊಟೇಲ್ ನಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಅಕಸ್ಮಾತ್ ಆಗಿ ಬರಸಿಡಿಲಿನಂತೆ ಬಂದು ಎರಗಿದ ಈ ಕುಟುಂಬಕ್ಕೆ ದಿಕ್ಕು ತೋಚದಂತಾಯಿತು. ಆ ಸಂದರ್ಬದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ ಮನವಿ ನೀಡಿ…